Sunday, April 26, 2020

ಹೆಣ್ಣು ಗಂಡಿನ ಗುಲಾಮಳ?


ಹೆಣ್ಣು  ಒಂದು ಸ್ವಾಭಾವಿಕ ಜೀವಿ,ಸಕಲ ಕಲೆಗಳನ್ನು ಹೊಂಡಿರುವಳೆ ಹೆಣ್ಣು.ಹೆಣ್ಣು ಹೇಗೆ ಸಂಸಾರದ ಕಣ್ಣು ಏನ್ನುತಿವೋ ಹಾಗೇ ಒಂದು ಹೆಣ್ಣಿನ ಕಥೆಯೂ ಇದೆ!!! ಸರಳ ಎಂಬ ಸುಂದರ ಹುಡುಗಿ,ಓದಿನಲ್ಲಿ ಹೆಚ್ಚು ಆಸಕ್ತಿ , ಇoಪಾದ ಕಂಠ,ಹೆಣ್ಣಿಗೆ ಇಷ್ಟು ಇದ್ದರೆ ಸಾಕೇ??....... ಎಲ್ಲಾ, ಒಂದೇ ಸಮ ಹಠ ಹಿಡಿದ ಸರಳ ತಾನು ಓದಿ ಒಳ್ಳೆ  ಉದ್ಯೋಗಕ್ಕೆ ಹೋಗಿ , ಸಂಬಳ ಗಳಿಸಿ ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಅವಳ ಮೊದಲ ಬಯಕೆ , ಆದರೆ ಅಪ್ಪ-ಅಮ್ಮನ ಆಸೆ ಅದಾಗಿಲ್ಲವೇ ........!!ಅವರಂತೆಯೇ ಒoದು ಒಳ್ಳೆಯ ಉದ್ಯೋಗದಲ್ಲಿರುವ ಹುಡುಗನನ್ನೇ ಮದುವೆಯಾಗುತ್ತಾಳೆ..........ಸಂಸಾರ ಶುರುವಾಗುತ್ತದೆ ಈಗೆ ಒಂದು ವರ್ಷ ಕಾಲ ಕಳೆಯುತ್ತಾರೆ ......... ಅಗಸ ಗೋಣಿ ಎತ್ತಿ ಒಗೆಯುವ ಹಾಗೇ ಎಲ್ಲವೂ ಸ್ವಲ್ಪ ದಿನಗಳು ಮಾತ್ರ,ಆನಂತರ ಗಂಡ ಹೆಂಡ್ತಿ ಮಧ್ಯ ಜಗಳ ಶುರವಾಯಿತು ಕಾರಣ ಸರಳ ಅವಿದ್ಯಾವಂತೆ, ಈಗೆ ಅವಳನ್ನು ಹಿಯಲಿಸುತ್ತ ಜೀವನ ನಡೆಯುತ್ತೆದೆ!!!!!
ಜೀವನದಲ್ಲಿ ಯಾವತ್ತೂ ನಾನು ಮೇಲು ನೀನು ಕೀಳು ಎನ್ನುವುದು ಇಬ್ಬರಲ್ಲೂ ಬರಬಾರದು ಆದರೆ ಈ ದಂಪತಿಗಳ ಜೀವನ ಚರಿತ್ರೆ  ವಿಚಿತ್ರ....ತಾಯಿಯಾಗಿ ಸಲಹುವಳು ಹೆಣ್ಣು!ಅಕ್ಕನಾಗಿ ಸರಿ ತಪ್ಪು  ತಿದ್ದುವಳು ಹೆಣ್ಣು!ಹೆಂಡತಿಯಾಗಿ ಮನೆ ಬೆಳಗುವಳು ಹೆಣ್ಣು! ಆದರೆ ಇಲ್ಲಿ ಗಂಡನ ಪಾಲಿಗೆ ಹೆಣ್ಣೇ ಸಂಸಾರದ ಕಲ್ಲು - ಮುಳ್ಳು..............
ಸಹನೆಗೂ ಮಿತಿ ಇದೆ ,ಅತಿಯಾದರೆ ಅಮೃತನೂ ವಿಷ ಅನ್ನೋ ಹಾಗೆ, ಸರಳ ಅವಿದ್ಯಾವಂತೆ ಅನ್ನುವ ಚಿಕ್ಕ ಕಾರಣಕ್ಕೆ ಇಷ್ಟೆಲ್ಲಾ..............ರಾತ್ರಿಯೆಲ್ಲ ಯೋಚಿಸುತ್ತಾ ಮಲಗುತ್ತಾಳೆ! ಎಷ್ಟೋ ಮಹಿಳೆಯರು ಏನೆಲ್ಲಾ ಸಾಧನೆ ಮಾಡಿದ್ದಾರೆ, ಬಾಹ್ಯಾಕಾರದಲ್ಲಿ ಕಲ್ಪನಾ ಚಾವ್ಲಾ, ಮದರ್ ಥೆರೇಸಾ , ಆನಂದಿ ಗೋಪಾಲ್ ಜೋಷಿ ,ಹೀಗೆ ನೂರಾರು ಮಹಿಳೆಯರು.....!!!! ನನ್ನ ಕೈಯಲ್ಲಿ ಯಾಕೆ ಆಗುವುದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡಿ ಗಂಡನನ್ನು ಬಿಟ್ಟು ಓದಲು  ಆರಂಭಿಸುತಾಳೆ.ರಾತ್ರಿ-ಹಗಲು ಎನ್ನುವುದು ಅರಿವಿಲ್ಲದೆ ಓದಿ  ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿ ಐಎಎಸ್  ಅಧಿಕಾರಿಯಾಗುತ್ತಾಳೆ........ ಕೊನೆಗೂ ತನ್ನ ಸಾಧನೆಯ ಹಾದಿಯಲ್ಲಿ ಸರಳ ಗೆಲ್ಲುತ್ತಾಳೆ, ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಇದೇ ಸಾಕ್ಷಿ.....!!!! ಆಗ ಎಲ್ಲೋ ಇದ್ದ ಗಂಡನು ತನ್ನ ಹೆಂಡತಿಗಾಗಿ ಕರೆಯುತ್ತಾನೆ. ಅವಿದ್ಯಾವಂತ ಯಾದಾಗ ಬೇಡವಾದ ಹೆಂಡತಿ ಈಗ ಅದೇ ಹೆಂಡತಿ ವಿದ್ಯಾವಂತರು ಆಗಿರುವುದನ್ನು ಕಂಡು ಬಹಳ ಅಚ್ಚರಿಯನ್ನುಂಟು ಮಾಡುತ್ತದೆ ಈ ಜಗತ್ತಿಗೆ ತನ್ನ ಹೆಂಡತಿ ಎಂದು ಹೇಳಿಕೊಳ್ಳುವ ಆಸೆ ಅವನಿಗೆ, ಇದೇ ಪ್ರಪಂಚ........!! ಹಿಂದಿನ ಕಾಲದಲ್ಲಿ ತಲೆ ಮೇಲೆ ಸೆರಗು ಹಾಕಿ ಬಾಗಿಲಲ್ಲಿ ಕಾಯುತ್ತಿದ್ದ ಹೆಣ್ಣು !!!ಹಣೆಗೆ ಕುಂಕುಮ ತಲೆಯ ತುಂಬಾ ಹೂವು ಮುಡಿಯುತ್ತಿದ್ದ ಹೆಣ್ಣು!! ಗಂಡ ಬಿಟ್ಟ ತಟ್ಟೆಯಲ್ಲಿ ಉಳಿದ ಅನ್ನ ತಿನ್ನುತ್ತಿದ್ದ ಹೆಣ್ಣು ಎಲ್ಲವನ್ನೂ ಧಿಕ್ಕರಿಸಿ ವಿದ್ಯಾವಂತ ಸಾಧನೆಯ ದಾರಿಯಲ್ಲಿ ಹೆಣ್ಣು.............
ತಾನು ಮೇಲು ತಮ್ಮಂತೆಯೇ ಗಂಡಸ್ತನ ಹೆಚ್ಚು ಎನ್ನುತ್ತಿದ್ದವರಿಗೆ ,ತನಗಿಂತ ಹೆಚ್ಚು ಓದಿ ಹೆಚ್ಚು ಸಂಪಾದನೆ ಮಾಡುತ್ತಾಳೆ........ಪ್ರಪಂಚಕ್ಕೆ ತಾನು ತನ್ನ ಸ್ಥಾನವನ್ನು ತೋರಿಸುತ್ತಾಳೆ!!!!!......ಇಲ್ಲಿ ಯಾವುದು ಶಾಶ್ವತವಲ್ಲ.... ರೊಟ್ಟಿ ತಿರುವಿ ಹಾಕೋ ಕಾಲದಲ್ಲಿ ಇಷ್ಟೆಲ್ಲಾ  ಒಂದು ನಿದರ್ಶನವಾಗಿದೆ .........ನಾಲ್ಕು ಗೋಡೆ ಮಧ್ಯ ಮಾತ್ರ ಹೆಣ್ಣು ಸೀಮಿತ  ಎಂಬುದು ಕೇವಲ ಕಾಲ್ಪನಿಕ........ ಜೀವನದಲ್ಲಿ ಯಾರಿಗೆ ಯಾರು ಗುಲಾಮರಲ್ಲ ....men and women both are equal....

Copyright restricted
Padmini

No comments:

Post a Comment