Friday, April 17, 2020

"ನಿಲುಕದ ನಕ್ಷತ್ರ"





ಭೂಮಿ ಆಕಾಶ್ ಒಳ್ಳೇ ಸ್ನೇಹಿತರು,ಹೀಗೆ ದಿನ ಕಳೆಯುತ್ತಾ ಹೋದಂತ್ತೇ ಇವರಲ್ಲಿ 'ಹೂ ಅರಳುವ 'ಹಾಗೇ ಪ್ರೀತಿಯು ಕೂಡ ಅರಳುತ್ತಾ ಹೋಗುತ್ತದೆ ,ಆದರೆ ಇವರಿಬ್ಬರಲ್ಲಿ ಪರಸ್ಪರ ಇಷ್ಟ ಅಂತಾ ಹೇಳುವುದಿಲ್ಲ .....ಅವತ್ತು *"ಪೌರ್ಣಿಮೆಯ ಚಂದ್ರನ ಬೆಳೆದಿಂಗಳ ತಂಪಾದ ಗಾಳೀ" ಆಕಾಶ್ ಭೂಮಿ ಒಟ್ಟಾಗಿ ಕೈ ಹಿಡಿದುಕೊಂಡು ನಿಲ್ಲುತ್ತಾ ಮಾತಾನಾಡುತ್ತಾರೆ,ಮೊದಲು ಆಕಾಶ್ ಭೂಮಿಯ ಮುಖ ನೋಡುತ್ತಾ ಭೂಮಿಯನ್ನು ಪ್ರೆಶ್ನೀಸುತ್ತಾನೇ ?

ಭೂಮಿ ನೀನೇ ನನ್ನ ಜೀವನ ಎಂದು ಭಾವಿಸುತ್ತಾನೆ. ನನಗೇ ಗೊತ್ತಿಲ್ಲದಹಾಗೇ ನೀನು ನನ್ನ ಮನಸ್ಸು ಕದ್ದಿದ್ದೀಯ ,ನೀನು ಹು ಅಂದರೇ ನಾನು ನಿನ್ನ ಮದುವೆಯಾಗುತ್ತೆನೆ ನಿನ್ನ ಉತ್ತರಕ್ಕೇ ಕಾಯುತ್ತೇನೆ ಎಂದು ಹೇಳಿ ಸುಮ್ಮನಾಗುತ್ತಾನೆ!!!!!!

 ಅವಳು ಐದು ನಿಮಿಷ ಮೌನವಾಗುತ್ತಾಳೆ ..........

ನಂತರ  ಆಕಾಶ್ ನಾನು ಕೂಡ ನನಗೇ ಗೊತ್ತಿಲ್ಲದ ಹಾಗೇ ನಿನ್ನನ್ನು ಪ್ರೀತೀ ಮಾಡಿದೇ ಕ್ಷಮಿಸು ಎಂದು ಹೇಳುತ್ತಾಳೆ........
 ಇವರಿಬ್ಬರ ಮದ್ಯೇ ಮೊಗ್ಗಾದ ಹೂ ಅರಳುವುದಕ್ಕೆ ಪ್ರಾರಂಭವಾಗುತ್ತದೆ.

ಭೂಮಿಗೇ ತುಂಬಾ ಸಹನೆ ಸ್ವಭಾವ ,
"ಇವಳಿಗೇ ಹಕ್ಕೀ ತರ ಹಾರಾಡುವುದೆಂದರೇ ಇಷ್ಟ" !!! "ನಗೋ ಹೂವಿನ ಮದ್ಯೇ ಜೇನಿನ ಹಾಗೇ ಔರುವುದು ಇಷ್ಟ"  !!!!!ಚಂದ ಮಾಮನ ಬೆಳಕಲ್ಲೀ ಕುಣಿದಾಡುವುದು ಇಷ್ಟ!!!!ಆದರೇ ಆಕಾಶ್ ಗೇ, "ಭೂಮಿಯನ್ನು ಪಂಜರದಲ್ಲಿ ಇಡುವುದು ಇಷ್ಟ" .........ಕಾರಣ? ಭೂಮಿ ನನ್ನವಳೂ ನನಗೇ ಮಾತ್ರ ಸ್ವಂತ .ಆದರೆ ಭೂಮಿಗೆ ಪಂಜರದ ಹಕ್ಕೀಯಂತೆ ಬದುಕಲು ಇಷ್ಟವಿಲ್ಲ ..... ಆಕಾಶ್ ಗೇ ಇದನ್ನು ಅರ್ಥಮಾಡಿಸುವ ಪ್ರಯತ್ನ ಮಾಡುತ್ತಾಳೆ ,ಅದಕ್ಕೇ ಆಕಾಶ್ ಕಣ್ಣೀರು ಹಾಕುತ್ತಾ ಭೂಮಿಗೆ ಹೇಳುತ್ತಾನೆ .....

ಭೂಮಿ ನೀನು ಇಲ್ಲದೇ ನಾನು ಹೇಗೆ ಬದುಕ್ಕುತ್ತೇನೆ  ಎಂಬುದು ಹೂಯಿಸಲೂ ಸಾದ್ಯವಿಲ್ಲ ,'ನೀರು ಇಲ್ಲದೇ ಮೀನು ಹೇಗೆ ಬದುಕಲು ಸಾದ್ಯವಿಲ್ಲವೊ' ?ನೀ ಇಲ್ಲದೆ ನಾನು ಬದುಕುವುದಿಲ್ಲ ಕಣೇ......
ಪಾಪ ಭೂಮಿ !!ಕಣ್ಣೀರು ಹಾಕುತ್ತಾ ಹೌದೂ ಕಣೋ ಆಕಾಶ್ ನಗೋ ಹೂವಿಗೆ ರಕ್ಷಣೆಯಾಗೀ ಮುಳ್ಳು ಬೇಕೆ ಬೇಕು...........ನೀ ಇಲ್ಲದೆ ನಾನಿಲ್ಲ ಅಂತಾ ಆಕಾಶ್ ನ ಅಪ್ಪಿಕೊಂಡು ಅಳುತ್ತಾಳೆ, ಇವರಿಬ್ಬರ ಪ್ರೀತೀ ಹಾಲು ಜೇನಿನ ಹಾಗೇ ಇರುತ್ತದೆ .ಹೀಗೇ ಸ್ವಲ್ಪ ದಿನ ನಗಡೆಯುತ್ತಾ ಹೋಗುತ್ತದೆ ರೆಕ್ಕೇಯು ಬಂದಾ ಹಕ್ಕೀ ಹೇಗೇ ಹಾರಾಡುತ್ತದಯೋ,ಹಾಗೇ ಭೂಮಿಯೂ ಕೂಡ ಮನೆಯವರಿಂದ ದೂರವಾಗುತ್ತಾಳೇ ,ಭೂಮಿಗೇ ಆಕಾಶ್ ಪ್ರಪಂಚ ಇವಳ ಪ್ರಕಾರ ವಾತಾವರಣದಲ್ಲೀ ಬೇಕಾದಷ್ಟು ಅನಿಲಗಳಿದ್ದರೂ ಉಸಿರಾಡುವುದಕ್ಕೇ ಆಮ್ಲಜನಕವೇ ಬೇಕು ಅನ್ನುವ ಹಾಗೇ ಆಕಾಶ್ ಬೇಕು.....!!

ಅಷ್ಟರಲ್ಲೀ ಆಕಾಶ್ ಮನೆಯಲ್ಲೀ ಮದುವೇ ಅನ್ನುವ ಮಾತೂ ಶುರುವಾಯಿತು ತಾಯೀಯೇ ಮೊದಲ ಗುರು ,ತಾಯಿಯ ಮಾತೇ ವೇದ ವಾಕ್ಯ ಅನ್ನುವ ಆಕಾಶ್ ,ಅಮ್ಮನ ಮಾತಿನಂತೇ ಬೇರೆ ಹುಡುಗಿಯನ್ನು ಮದುವೇಯಾಗುತ್ತಾನೆ. ಇತ್ತ ತನ್ನ ಕನಸಿನ ರಾಜ ನನ್ನನ್ನು ಮದುವೆಯಾಗುತ್ತಾನೇ ಅನ್ನೂ ಅಷ್ಟರಲ್ಲೀ ಆಕಾಶ್ ಮತ್ತು ಅನನ್ಯ ಮದುವೆಯಾಗುತಾರೆ.........

 ಭೂಮೀ ಕಣ್ಣೀರು ಹಾಕುತ್ತಾ ಹೇಗೋ ಸ್ವಲ್ಪ ದಿನಗಳು ಕಳೆಯುತ್ತದೇ,ತನ್ನ ರಾಜ ಕುಮಾರನಿಗೆ ಮತ್ತೊಬ್ಬ ರಾಣಿ ಸಿಕ್ಕಿದ ಮೇಲೇ ನಾನು ಆಸೇ ಪಡುವುದು ತಪ್ಪು ಎಂದು ಅರಿವು ಆಗುತ್ತೆ ,ಅಷ್ಠರಲ್ಲೀ ಅವಳ ಮನಸ್ಸು ನುಚ್ಚು ನೂರಾಗೀ ಬಿಡುತ್ತದೇ......... ಸ್ವಲ್ಪ ದಿನಗಳ ನಂತರ ಆಕಸ್ಮಿಕವಾಗಿ ಆಕಾಶ್ ಸಿಗುತ್ತಾನೆ ಭೂಮಿಯ ಮುಖ ನೋಡೀ ಸಪ್ಪಗೆ ಆಗುತ್ತಾನೇ ,ಭೂಮಿ ನನಗೆ ತಾಯಿಯ ಮಾತುಮೀರುವ ಶಕ್ತೀ ಇಲ್ಲ ನನ್ನನ್ನು ಕ್ಷಮಿಸು!!! ಈಗಲು ನನ್ನ ಮನಸ್ಸೀನಲ್ಲಿ ನಿನಗೇ ಮೊದಲ ಸ್ಥಾನ ಅಂತಾ ಹೇಳುತ್ತಾನೆ....ಅವನ ಮಾತು ಮುಗಿದ ನಂತರ ??

ಆಕಾಶ್ ಪ್ರೀತಿ ಮಾಡೋದು ಹೇಳಿಕೊಟ್ಟದ್ದು ನೀನೂ ,ಆದರೇ ನೀನು ಇಲ್ಲದೇ ಹೇಗೇ ಬದುಕಬೇಕು ಎಂದು ಹೇಳಿಕೊಟ್ಟಿಲ್ಲ ????
ಅದು 'ಜೀವನ ಹೇಳೀಕೊಟ್ಟಿತು' .....ನಿನ್ನ ಪಾಲಿಗೇ ಯಾವತ್ತೂ ನಾನು ಸಿಗುವುದಿಲ್ಲ .ಈ ಪ್ರಪಂಚದಲ್ಲೀ ಹೇಗೇ ಆಕಾಶ-ಭೂಮಿ ಜೊತೆಯಾಗಿರುವುದಿಲ್ಲವೋ ಹಾಗೇ ನಾವೂ ಕೂಡ ಯಾವತ್ತೂ ಜೊತೆಯಾಗಿರುವುದಿಲ್ಲ .........ನಿನ್ನ ಪಾಲಿಗೇ "ನಿಲುಕದ ನಕ್ಷತ್ರ" ನಾನು ಎಂದು ಹೇಳೀ ಹೊರಟು ಹೋಗುತ್ತಾಳೇ....!!!!

copyright restricted
-padmini 

1 comment: